ಎಲ್ಲ ಜೀವಿಗಳೂ ಆನಂದದಿಂದ ಜೀವಿಸಲಿ!
ದೇವರು ಒಬ್ಬನೇ, ನಮಗೆಲ್ಲರಿಗೂ ಇರುವುದು ಒಂದೇ ಜನಾಂಗ-ಕುಲ!
ನಮ್ಮ ದೇಹದಲ್ಲಿ ನಿಷ್ಕಲ್ಮಷನಾದ ಪರಮಾತ್ಮ ದೇವಾಲಯದಂತೆ ನೆಲೆಸಿರುವನು! – ತಿರುಮಂದಿರಂ

ಸರ್ವಾಂತರ್ಯಾಮಿಯಾದ, ಅತಿ-ಶಕ್ತಿಶಾಲಿಯಾದ ಭಗವಂತನು ನಮ್ಮ ಶಿರದ ಮಧ್ಯಭಾಗದಲ್ಲಿ ದೈವಿಕ ಬೆಳಕು ಮತ್ತು ಜೀವದಂತೆ (ಆತ್ಮ) ಇರುವನು, ಅಲ್ಲಿಂದ ಅವನು ನಾಡಿಗಳ ಮೂಲಕ ನಮ್ಮ ಎರಡು ಕಣ್ಣುಗಳಲ್ಲಿ ಮಿನುಗುತ್ತಿರುವನು. ಇದೇ ದೈವಿಕ ರಹಸ್ಯ! ಇದೇ ವೈದಿಕ ಬುದ್ಧಿಮತ್ತೆಯ ರಹಸ್ಯ. ನಮ್ಮ ಎರಡು ಕಣ್ಣುಗಳೇ ಭಗವಂತನ ಎರಡು ದೈವಿಕ ಪಾದಗಳು. ನಮ್ಮ ಕಣ್ಣುಗಳ ಮೂಲಕ ಬೆಳಗುವ ಜೀವನದ ದೈವಿಕವಾದ ಬೆಳಕನ್ನು ಅರ್ಹ ಜ್ಞಾನ ಸದ್ಗುರುವಿನ ಮೂಲಕ ನಾವು ಭಾವಿಸಬೇಕು.

ಮನಸ್ಸನ್ನು ಕಣ್ಣುಗಳಲ್ಲಿನ ಬೆಳಕಿನ ಮೇಲೆ ಕೇಂದ್ರೀಕರಿಸಿ ಕಣ್ಣುಗಳನ್ನು ತೆರೆದು ಧ್ಯಾನವನ್ನು ಮಾಡಬೇಕು, ಕಂಬನಿಗಳು ಚೆಲ್ಲುತ್ತವೆ, ಒಳಗಿನ ದೈವಿಕವಾದ ಬೆಳಕು ಮತ್ತು ಕೃಪೆಯನ್ನು ಭಾವಿಸಬಹುದು. ಕಣ್ಣುಗಳಲ್ಲಿ ಭಗವಂತನ ಅನುಗ್ರಹವನ್ನು ಚಿಂತಿಸುತ್ತಾ ಕೃತಜ್ಞತೆಯ ಆಶ್ರುವನ್ನು ನಾವು ಚೆಲ್ಲೋಣ, ಪೂರ್ವ ಜನ್ಮದಿಂದ ಬಂದ ಕರ್ಮದ ಖಾತೆಯು ಕಳೆದು ನಾವು ನಮ್ಮೊಳಗೆ ದೇವರ ದರ್ಶನವನ್ನು ಪಡೆಯೋಣ. ಇದೇ ಜೀವ ಕಾರುಣ್ಯದ ಸಾರ! ಸನ್ಮಾರ್ಗ! (ನಿಮ್ಮ ಆತ್ಮವನ್ನು ಕರುಣೆಯಿಂದ ನೋಡಿ!) ಇದೇ ಮಂಗಳಕರವಾದ ಮಾರ್ಗ! ಇದೇ ದೇವರ ಪೂಜೆ ಎಂದು ತಿರಿವರುತ್ ಪ್ರಕಾಶ ವಲ್ಲಲಾರರು ಹೇಳಿದ್ದಾರೆ.

ಧ್ಯಾನ, ತಪಸ್ಸು ಮುಚ್ಚಿದ ಕಣ್ಣುಗಳಿಂದ ಮಾಡಬಾರದು. ಇದರ ಅರ್ಥವೇನೆಂದರೆ ನಮ್ಮ ಕಣ್ಣುಗಳಲ್ಲಿರುವ ಜೀವನದ ಹೊಳಪನ್ನು ಅರ್ಹ ಗುರುವಿನ ದೀಕ್ಷೆಯ ಮೂಲಕ ಅರಿತುಕೊಳ್ಳಬೇಕು ಹಾಗೂ ನಂತರ ನಮ್ಮ ಕಣ್ಣುಗಳ ಮೂಲಕ ಉಲ್ಲಾಸದ ಹೊಳಪನ್ನು ವರ್ಧಿಸಿಕೊಳ್ಳಬೇಕು. ದೇವರನ್ನು ಹೊರಗಡೆ ಹುಡುಕುವುದೇ ಭಕ್ತಿ – ಹೊರಗಿನ ಪೂಜೆ – ಅದು ಮೊದಲಿನ ಪದ್ಧತಿ. ದೇವರನ್ನು ದೇಹದ ಒಳಗಡೆ ಹುಡುಕುವುದು – ಜ್ಞಾನ – ಒಳಗಿನ ಪೂಜೆ – ಮುಕ್ತಿ.

ಜ್ಞಾನವಂತರು, ಋಷಿಗಳು, ಸಿದ್ಧ ಜ್ಞಾನಿಗಳೆಲ್ಲರೂ ನಮ್ಮ ಕಣ್ಣುಗಳ ಮೂಲಕ ದೇವರನ್ನು ಅರಿಯುವ ಮಾರ್ಗವನ್ನು ತೋರಿಸಿದ್ದಾರೆ. ನಿನ್ನೆಯವರೆಗೂ ಏನಾಗಿದ್ದರೂ ಪರವಾಗಿಲ್ಲ. ಇಂದಿನಿಂದ ಯಾವ ದುಶ್ಚಟಗಳಿಗೂ ಹೋಗಬೇಡಿ. ಯಾವ ಜೀವಿಯನ್ನೂ ಕೊಲ್ಲಬೇಡಿ. ಮಾಂಸಾಹಾರವನ್ನು ತಿನ್ನಬೇಡಿ. ಭಕ್ತಿಯನ್ನು ಹೊಂದಿರಿ, ನಮ್ರತೆಯನ್ನು ಹೊಂದಿರಿ. ಅರ್ಹತೆಯುಳ್ಳ ಗುರುವಿನಿಂದ ಉಪದೇಶ ಮತ್ತು ದೀಕ್ಷೆಯನ್ನು ಪಡೆದು ದೇವರನ್ನು ಸೇರಲು ತಪಸ್ಸು ಮಾಡಿ. ದೇವರನ್ನು ಅರಿಯಲು ಪ್ರತಿಯೊಬ್ಬರಿಗೂ ಅರ್ಹತೆಯಿದೆ. ಪ್ರತಿಯೊಬ್ಬರಿಗೂ ಇದೇ ಸಂದೇಶ.

ಎಂದೆಂದಿಗೂ ನಿಮ್ಮ,
ಜ್ಞಾನ ಸರ್ಗುರು ಶಿವ ಸೆಲ್ವರಾಜ್
ಕನ್ಯಾಕುಮಾರಿ

To share

Leave a comment